ಅದರಗುಂಚಿ, ಆಗಸ್ಟ್ 8:
ಪರಿಸರ ಸಂರಕ್ಷಣೆ ಮತ್ತು ಹಸಿರು ಭವಿಷ್ಯ ನಿರ್ಮಾಣದ ಸಂಕಲ್ಪದೊಂದಿಗೆ SMFG India Credit, Sacred ಸಂಸ್ಥೆ, ನೆರವು ಸಂಸ್ಥೆ, ಕಲ್ಪವೃಕ್ಷ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಭಾರತ್ ಕಾನ್ವೆಂಟ್ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅದರಗುಂಚಿ ಗ್ರಾಮದ ಭಾರತ್ ಕಾನ್ವೆಂಟ್ ಸ್ಕೂಲ್ ಆವರಣದಲ್ಲಿ ಅರ್ಥಪೂರ್ಣ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು. ಪ್ರಕೃತಿಯೊಂದಿಗೆ ಮಾನವನ ಅವಿನಾಭಾವ ಸಂಬಂಧವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
SMFG India Credit ಸಂಸ್ಥೆಯ ಪದಾಧಿಕಾರಿಗಳಾದ ಸುನೀಲ್ ಹಾಗೂ ಶಿವು ಮಾತನಾಡಿ, ಜಾಗತಿಕ ತಾಪಮಾನ ಏರಿಕೆ, ಪರಿಸರ ಮಾಲಿನ್ಯ ಹಾಗೂ ಅರಣ್ಯ ನಾಶದಂತಹ ಸವಾಲುಗಳನ್ನು ಎದುರಿಸಲು ಗಿಡ ನೆಡುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪಾಲನೆ ಮಾಡುವ ಮೂಲಕ ಪರಿಸರ ಸಮತೋಲನ ಕಾಪಾಡುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಭಾರತ್ ಕಾನ್ವೆಂಟ್ ಸ್ಕೂಲ್ ಮುಖ್ಯಸ್ಥರಾದ ಶ್ರೀ ಸುಭಾಸ್ ಅಂಚಿ ಮಾತನಾಡಿ, “ಇಂದಿನ ಮಕ್ಕಳು ನಾಳಿನ ಪರಿಸರ ರಕ್ಷಕರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನು ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಗಿಡಗಳನ್ನು ಬೆಳೆಸುವುದು ಕೇವಲ ಪರಿಸರ ಸಂರಕ್ಷಣೆ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಸುರಕ್ಷಿತ ಬದುಕಿನ ಭರವಸೆಯಾಗಿದೆ” ಎಂದು ಹೇಳಿದರು.
ನೆರವು ಸಂಸ್ಥೆಯ ಅಧ್ಯಕ್ಷರಾದ ಸಾರಾ ಗೋಕಾವಿ ಮಾತನಾಡಿ, “ಒಂದು ಗಿಡ – ಒಂದು ಜೀವ, ಒಂದು ಮರ – ಒಂದು ಭವಿಷ್ಯ” ಎಂಬ ಘೋಷಣೆಯ ಮಹತ್ವವನ್ನು ವಿವರಿಸಿದರು. ಒಂದು ಗಿಡವು ಕೇವಲ ಸಸ್ಯವಲ್ಲ; ಅದು ಜೀವಿಗಳಿಗೆ ಆಶ್ರಯ, ಮನುಷ್ಯನಿಗೆ ಉ
إرسال تعليق