⚡ಟ್ರೆಂಡಿಂಗ್

ಆನೆಗಳ ರಕ್ಷಣೆ: ಅರಣ್ಯ ಇಲಾಖೆ–ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ದುರಂತ

ಅಸ್ಸಾಂ: ಅಸ್ಸಾಂನ ಹಬಿಪುರ ಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಭೀಕರ ರೈಲು ದುರಂತವೊಂದು ಅರಣ್ಯ ಇಲಾಖೆ ಹಾಗೂ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದೆ.

ಹಬಿಪುರ ಮಾರ್ಗದಲ್ಲಿ ಕಾಡಾನೆಗಳ ಹಿಂಡು ರೈಲು ಹಳಿಯನ್ನು ದಾಟುತ್ತಿರುವುದನ್ನು ಲಂಕಾ ವಲಯದ ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಯಾವುದೇ ವಿಳಂಬ ಮಾಡದೆ ಲುಮ್ಡಿಂಗ್ ರೈಲ್ವೆ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸಿದ್ದಾರೆ.

ಅದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ವೇಗವಾಗಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿತ್ತು. ಅರಣ್ಯ ಇಲಾಖೆಯಿಂದ ಮಾಹಿತಿ ಸಿಕ್ಕ ತಕ್ಷಣ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.

ಇದರಿಂದ ಹಳಿಯಲ್ಲಿದ್ದ ಕಾಡಾನೆಗಳ ಹಿಂಡಿಗೆ ಯಾವುದೇ ಅಪಾಯ ಸಂಭವಿಸದೆ, ಮೂಕ ಪ್ರಾಣಿಗಳ ಜೀವ ಉಳಿದಿದೆ. ಸಮಯೋಚಿತ ಮಾಹಿತಿ, ತ್ವರಿತ ನಿರ್ಧಾರ ಹಾಗೂ ಅರಣ್ಯ ಇಲಾಖೆ–ರೈಲ್ವೆ ಇಲಾಖೆಯ ಸಮನ್ವಯದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ವನ್ಯಜೀವಿಗಳ ರಕ್ಷಣೆಗೆ ತೋರಿದ ಈ ಕರ್ತವ್ಯನಿಷ್ಠೆ ಹಾಗೂ ಮಾನವೀಯ ಕಾರ್ಯಕ್ಕೆ ಅರಣ್ಯ ಇಲಾಖೆ ಮತ್ತು ರೈಲ್ವೆ ಸಿಬ್ಬಂದಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂಕ ಪ್ರಾಣಿಗಳ ಜೀವ ಉಳಿಸಿದ ನೈಜ ಹೀರೋಗಳಿಗೆ ಒಂದು ಸಲಾಂ!

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...