, ಜು.3: ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ 6 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಂಜೂರಾಗಿರುವ ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಗೌರವಧನ ಆಧಾರಿತ ಸೇವೆಗಾಗಿ ಅಧಿಸೂಚನೆ ಪ್ರಕಟಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಜುಲೈ 16, 2026ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಚೇರಿ, ಧಾರವಾಡಗೆ ಅರ್ಜಿ ಸಲ್ಲಿಸಬೇಕು.
ತಾಲೂಕುವಾರು ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ವಿವರ
ಧಾರವಾಡ ಗ್ರಾಮೀಣ ತಾಲೂಕು – ಒಟ್ಟು 7 ಕೇಂದ್ರಗಳು
- ಗರಗ – 9
- ಕಲ್ಲಾಪುರ
- ನರೇಂದ್ರ – 11 (ಕಾಯಕನಗರ)
- ನರೇಂದ್ರ – 3
- ಅಳ್ನಾವರ – 5
- ಮರೆವಾಡ – 1
- ಹೆಬ್ಬಳ್ಳಿ – 12
ಹುಬ್ಬಳ್ಳಿ ಗ್ರಾಮೀಣ ತಾಲೂಕು – ಒಟ್ಟು 5 ಕೇಂದ್ರಗಳು
- ಇಂಗಳಹಳ್ಳಿ – 1
- ಚನ್ನಾಪುರ – 2
- ಮಂಟುರ – 3
- ಗಂಗಿವಾಳ
- ಕರಡಿಕೊಪ್ಪ – 1
ಹುಬ್ಬಳ್ಳಿ–ಧಾರವಾಡ ಶಹರ ತಾಲೂಕು – ಒಟ್ಟು 12 ಕೇಂದ್ರಗಳು
- ಹಾವೇರಿಪೇಟೆ – 2
- ಮನಿಕಂಠ ನಗರ
- ಸಪ್ತಾಪುರ
- ಹೆಬ್ಬಳ್ಳಿ ಅಗಸಿ – 1
- ನವಲೂರ ಹರಿಜನಕೇರಿ
- ಜನ್ನತ ನಗರ – 2
- ಸುತಗಟ್ಟಿ
- ಅಮರಗೋಳ – 5
- ತಾರಿಹಾಳ – 3
- ಬ್ಯಾಹಟ್ಟಿ ಪ್ಲಾಟ್ – 1
- ವಲಬಾಯಿ ನಗರ
- ಈಶ್ವರ ನಗರ
ಕಲಘಟಗಿ ತಾಲೂಕು – ಒಟ್ಟು 6 ಕೇಂದ್ರಗಳು
- ದೇವಿಕೊಪ್ಪ – 3
- ಕುಂಬಾರ ಓಣಿ
- ಬಸವೇಶ್ವರ ನಗರ
- ಉಗ್ಗನಕೇರಿ
- ದಾಸ್ತಿಕೊಪ್ಪ – 3
- ದೇವಲಿಂಗಿಕೊಪ್ಪ – 1
ಕುಂದಗೋಳ ತಾಲೂಕು – ಒಟ್ಟು 6 ಕೇಂದ್ರಗಳು
- ಕಳಸ – 8
- ಕುಂದಗೋಳ – 19
- ಹಿರೇ ನೆರ್ತಿ – 2
- ಕಮಡೊಳ್ಳಿ – 9
- ಸಂಶಿ – 5
- ಯಲಿವಾಳ – 6
ನವಲಗುಂದ ತಾಲೂಕು – ಒಟ್ಟು 6 ಕೇಂದ್ರಗಳು
- ನವಲಗುಂದ – 05
- ನವಲಗುಂದ – 07
- ನವಲಗುಂದ – 22
- ಅಣ್ಣಿಗೇರಿ – 27
- ಅಣ್ಣಿಗೇರಿ – 29
- ಅಣ್ಣಿಗೇರಿ – 31
ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ವಿಧಾನ: ಆಫ್‌ಲೈನ್
- ಅರ್ಜಿಯ ಕೊನೆಯ ದಿನಾಂಕ: 16 ಜುಲೈ 2026
- ಅರ್ಜಿ ಸಲ್ಲಿಸಬೇಕಾದ ಸ್ಥಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಚೇರಿ, ಧಾರವಾಡ.
ಹೆಚ್ಚಿನ ಮಾಹಿತಿಗೆ
ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು (CDPO) ಸಂಪರ್ಕಿಸಿ ಅರ್ಜಿ ನಮೂನೆ, ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಾಂಶಗಳು:
- ✅ ಒಟ್ಟು ಹುದ್ದೆಗಳು: 42
- ✅ ಹುದ್ದೆಗಳು: ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಹಾಗೂ ಸಹಾಯಕಿ
- ✅ ಅರ್ಜಿ ವಿಧಾನ: ಆಫ್‌ಲೈನ್
- ✅ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಜುಲೈ 2026
- ✅ ಅರ್ಜಿ ಸಲ್ಲಿಸುವವರು: ಅರ್ಹ ಮಹಿಳಾ ಅಭ್ಯರ್ಥಿಗಳು
- ✅ ನೇಮಕಾತಿ: ಗೌರವಧನ ಆಧಾರಿತ ಸೇವೆ
Post a Comment