⚡ಟ್ರೆಂಡಿಂಗ್

ಸರ್ಕಾರಿ ಶಾಲಾ ಮಕ್ಕಳ ಶೂಗಳ ಗುಣಮಟ್ಟದ ಬಗ್ಗೆ ಪ್ರಶ್ನೆಕಳೆದ ವರ್ಷದ ₹265ರ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನ ಶೂಗಳ ಗುಣಮಟ್ಟದ ಬಗ್ಗೆ ಶಿಕ್ಷಕರು, ಪೋಷಕರ ಅನುಮಾನ

ಧಾರವಾಡ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಶೂಗಳ ಗುಣಮಟ್ಟದ ಕುರಿತು ಶಿಕ್ಷಕರು ಹಾಗೂ ಪೋಷಕರು ಅನುಮಾನ ವ್ಯಕ್ತಪಡಿಸಿರುವ ಘಟನೆ ಧಾರವಾಡ ತಾಲೂಕಿನ ಗೊಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಗೊಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 10 ಗಂಡು ಮಕ್ಕಳು ಹಾಗೂ 12 ಹೆಣ್ಣು ಮಕ್ಕಳು ಇದ್ದಾರೆ.
ಕಳೆದ 2025-26ನೇ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ತಲಾ ₹265 ಬೆಲೆಯ ಶೂಗಳನ್ನು ವಿತರಿಸಲಾಗಿತ್ತು. ಒಂದು ವರ್ಷ ಕಳೆದರೂ ಆ ಶೂಗಳು ಉತ್ತಮ ಸ್ಥಿತಿಯಲ್ಲಿ ಬಾಳಿಕೆ ಬರುತ್ತಿವೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಆದರೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿರುವ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ವಿತರಿಸಲಾದ ಶೂಗಳ ನೈಜ ಮೌಲ್ಯ ₹100ಕ್ಕೂ ಸಹ ಬಾಳುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಶೂಗಳ ಗುಣಮಟ್ಟ ಹಾಗೂ ಬಾಳಿಕೆ ಕುರಿತು ಶಿಕ್ಷಕರು ಮತ್ತು ಪೋಷಕರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಶೂಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಆದರೆ ಈ ಬಾರಿ ವಿತರಿಸಿರುವ ಶೂಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...