⚡ಟ್ರೆಂಡಿಂಗ್

ತತ್ವ-ಸಿದ್ಧಾಂತದ ಮೇಲೆ ಬಸವ ಧರ್ಮ ಪೀಠದ ನಿರ್ಮಾಣ: ಕೂಡಲಸಂಗಮದಲ್ಲಿ ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ

ತತ್ವ-ಸಿದ್ಧಾಂತದ ಮೇಲೆ ಬಸವ ಧರ್ಮ ಪೀಠದ ನಿರ್ಮಾಣ: ಕೂಡಲಸಂಗಮದಲ್ಲಿ ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ

ಕೂಡಲಸಂಗಮ, ಜು.15: ಬಸವ ಧರ್ಮ ಪೀಠದಲ್ಲಿ ಭಾನುವಾರ ರಾಷ್ಟ್ರೀಯ ಬಸವ ದಳದ ಮಹಾಅಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿ ಅವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಪಾಂಡುಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರವಚನ ನೀಡಿ, "ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರು ತಾವು ನಂಬಿದ ತತ್ವ-ಸಿದ್ಧಾಂತಗಳಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಜೀವನಪೂರ್ತಿ ಬಸವ ಧರ್ಮದ ಮೌಲ್ಯಗಳ ಆಧಾರದ ಮೇಲೆಯೇ ಬಸವ ಧರ್ಮ ಪೀಠವನ್ನು ಕಟ್ಟಿದರು" ಎಂದು ಸ್ಮರಿಸಿದರು.

ಇಂದಿನ ಸಮಾಜದಲ್ಲಿ ಸಂಬಂಧಗಳ ಮಹತ್ವವನ್ನು ಒತ್ತಿಹೇಳಿದ ಅವರು, "ನಾವು ಕೇವಲ ಅಭಿಮಾನಿಗಳಾಗದೆ ಅನುಭಾವಿಗಳಾಗಬೇಕು. ಸಿಟ್ಟು ಒಂದು ಪುಟವಿದ್ದಂತೆ, ಸಂಬಂಧ ಒಂದು ದೊಡ್ಡ ಪುಸ್ತಕ. ಒಂದು ಪುಟಕ್ಕಾಗಿ ಇಡೀ ಪುಸ್ತಕ ಕಳೆದುಕೊಳ್ಳಬಾರದು. ಸಂಬಂಧಗಳನ್ನು ಉಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು" ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರುಬಸವ ಸ್ವಾಮೀಜಿ, ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರು ಶರಣ ಮೇಳ ಮತ್ತು ಕಲ್ಯಾಣ ಪರ್ವಗಳ ಮೂಲಕ ಬಸವಣ್ಣನವರ ಪುಣ್ಯಭೂಮಿಗಳನ್ನು ವಿಶ್ವಕ್ಕೆ ಪರಿಚಯಿಸಿ ಅವುಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಮನಗೂಳಿಯ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಒಕ್ಕೂಟದ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಡೆದ ಅಧಿವೇಶನದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಕೆ.ವಿ. ವೀರೇಶ, ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಸೇರಿದಂತೆ ಸಾವಿರಾರು ಭಕ್ತರು ಹಾಗೂ ಬಸವ ಅಭಿಮಾನಿಗಳು ಭಾಗವಹಿಸಿದ್ದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...