⚡ಟ್ರೆಂಡಿಂಗ್

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಹೊರರಾಜ್ಯ ಪಾಸಿಂಗ್ ವಾಹನಗಳ ಹಾವಳಿ?ಕಡಿಮೆ ಬೆಲೆ ಆಮಿಷಕ್ಕೆ ಬಲಿಯಾಗುವ ಮುನ್ನ ಎಚ್ಚರ..!

ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ Delhi, UP, HR, Pondicherry ಸೇರಿದಂತೆ ಹೊರರಾಜ್ಯ ನೋಂದಣಿಯ ವಾಹನಗಳ ಓಡಾಟ ಹಾಗೂ ಮಾರಾಟ ಹೆಚ್ಚಾಗಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಕಡಿಮೆ ಬೆಲೆಯ ಆಮಿಷ ತೋರಿಸಿ ಹೊರರಾಜ್ಯಗಳಿಂದ ವಾಹನಗಳನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆಯೇ ಎಂಬ ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ “ಸರ್ಕಾರದ ನಿಯಮಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿವೆಯಾ?” ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಹೊರರಾಜ್ಯ ಪಾಸಿಂಗ್ ವಾಹನಗಳನ್ನು ಖರೀದಿಸುವ ಮೊದಲು ವಾಹನದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಅತ್ಯಗತ್ಯ. ಕಡಿಮೆ ದರದ ಆಮಿಷಕ್ಕೆ ಒಳಗಾಗಿ ವಾಹನ ಖರೀದಿಸಿದರೆ ಮುಂದೆ ರಸ್ತೆ ತೆರಿಗೆ (Tax), ಮಾಲೀಕತ್ವ ವರ್ಗಾವಣೆ (Ownership Transfer), NOC, ಪೊಲೀಸ್ ಪರಿಶೀಲನೆ ಹಾಗೂ ಇತರ ಕಾನೂನು ಪ್ರಕ್ರಿಯೆಗಳ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ವಾಹನ ಕ್ಷೇತ್ರದ ಪರಿಣಿತರು ಎಚ್ಚರಿಕೆ ನೀಡಿದ್ದಾರೆ.
ಅದರಲ್ಲೂ ವಾಹನದ ಹಿಂದಿನ ಇತಿಹಾಸ, ಸಾಲದ ಬಾಕಿ, ಅಪಘಾತ ಪ್ರಕರಣ, ಕಾನೂನು ವಿವಾದಗಳು ಅಥವಾ ದಾಖಲೆಗಳ ಸಮಸ್ಯೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ಖರೀದಿ ಮಾಡುವುದು ಅಪಾಯಕಾರಿಯಾಗಿದೆ.

ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ಹೊರರಾಜ್ಯದಿಂದ ಬಂದ ವಾಹನಗಳ ಬಳಕೆ ಹಾಗೂ ನೋಂದಣಿ ಬದಲಾವಣೆಗೆ ನಿರ್ದಿಷ್ಟ ಪ್ರಕ್ರಿಯೆಗಳು ಕಡ್ಡಾಯವಾಗಿದ್ದರೂ, ನಿಯಮ ಉಲ್ಲಂಘನೆ ನಡೆಯುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಸಾರ್ವಜನಿಕರ ಪ್ರಶ್ನೆ ಒಂದೇ —
“ಸರ್ಕಾರದ ಆದೇಶಗಳಿಗೆ ಕಿಮ್ಮತ್ತೇ ಇಲ್ಲವೇ..? ಅಥವಾ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿಕೊಂಡಿದ್ದಾರಾ..?”
ಹುಬ್ಬಳ್ಳಿ–ಧಾರವಾಡದಲ್ಲಿ Delhi, UP, HR, Pondicherry ಪಾಸಿಂಗ್ ವಾಹನಗಳ ಅಕ್ರಮ ಮಾರಾಟದ ಆರೋಪಗಳಿಗೆ ಕಡಿವಾಣ ಯಾವಾಗ ಬೀಳಲಿದೆ? ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಖಡಕ್ ಕ್ರಮ ಕೈಗೊಳ್ಳಲಿದೆಯಾ ಅಥವಾ ಮೌನವೇ ಮುಂದುವರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...