ಸುದ್ದಿ ಬೆನ್ನಲ್ಲೇ ಧಾರವಾಡ RTO ಸರ್ಜಿಕಲ್ ಸ್ಟ್ರೈಕ್..!
ಹೊರರಾಜ್ಯ ವಾಹನಗಳ ಮೇಲೆ ಖಡಕ್ ಕಾರ್ಯಾಚರಣೆ
ಧಾರವಾಡ: ಹೊರರಾಜ್ಯ ನೋಂದಣಿಯ ವಾಹನಗಳ ವಿರುದ್ಧ ಧಾರವಾಡ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದೆಹಲಿ (DL), ಉತ್ತರ ಪ್ರದೇಶ (UP), ಹರಿಯಾಣ (HR), ಪಾಂಡಿಚೇರಿ (PY), ಆಂಧ್ರ ಪ್ರದೇಶ (AP) ಸೇರಿದಂತೆ ವಿವಿಧ ರಾಜ್ಯಗಳ ಪಾಸಿಂಗ್ ವಾಹನಗಳ ದಾಖಲೆಗಳನ್ನು ಅಧಿಕಾರಿಗಳು ತೀವ್ರವಾಗಿ ಪರಿಶೀಲನೆ ನಡೆಸಿದರು.
ಕರ್ನಾಟಕದಲ್ಲಿ ದೀರ್ಘಕಾಲದಿಂದ ಸಂಚರಿಸುತ್ತಿದ್ದರೂ ನಿಯಮಾನುಸಾರ ತೆರಿಗೆ ಪಾವತಿ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಓಡಾಡುತ್ತಿರುವ ವಾಹನಗಳ ಬಗ್ಗೆ ಬಂದ ಮಾಹಿತಿಯ ಮೇರೆಗೆ RTO ಅಧಿಕಾರಿಗಳು ಫೀಲ್ಡ್‌ಗೆ ಇಳಿದು ತಪಾಸಣೆ ನಡೆಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ವಿಶೇಷ ಚೆಕ್ಕಿಂಗ್ ನಡೆಸಿದ ಅಧಿಕಾರಿಗಳು ವಾಹನಗಳ ನೋಂದಣಿ ದಾಖಲೆ, ತೆರಿಗೆ ಪಾವತಿ ವಿವರ, ವಿಮೆ, ಫಿಟ್ನೆಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ನಿಯಮ ಉಲ್ಲಂಘನೆ ಕಂಡುಬಂದ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಹೊರರಾಜ್ಯ ನೋಂದಣಿಯ ವಾಹನಗಳನ್ನು ಕರ್ನಾಟಕದಲ್ಲಿ ಬಳಸುವವರು ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು RTO ಇಲಾಖೆ ಎಚ್ಚರಿಕೆ ನೀಡಿದೆ.
ಸುದ್ದಿ ಪ್ರಸಾರವಾದ ಬೆನ್ನಲ್ಲೇ ನಡೆದ ಈ ಖಡಕ್ ಕಾರ್ಯಾಚರಣೆ ವಾಹನ ಮಾಲೀಕರಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸಿದೆ.
Post a Comment