⚡ಟ್ರೆಂಡಿಂಗ್

ದೇವರ ಭಂಡಾರ ಹಚ್ಚ್ತೀಯಾ... ನಿನಗೆ ಪಾಪ ಪ್ರಜ್ಞೆ ಆಗಲ್ವಾ?”ರೌಡಿ ಪರೇಡ್‌ನಲ್ಲಿ ರೌಡಿ ಶೀಟರ್‌ಗೆ ಕಮಿಷನರ್ ಖಡಕ್ ಕ್ಲಾಸ್

 (ನ್ಯೂ ವಿಜಯ ನ್ಯೂಸ್):
ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಶ್ರೀ ಎನ್. ಶಶಿಕುಮಾರ್ ಅವರು ರೌಡಿ ಪರೇಡ್ ವೇಳೆ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ನಡೆದ ಪರೇಡ್‌ನಲ್ಲಿ ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ಒಳ್ಳೆಯ ಜೀವನ ನಡೆಸುವಂತೆ ಆಯುಕ್ತರು ಸೂಚನೆ ನೀಡಿದರು.

ಈ ವೇಳೆ ಒಬ್ಬ ರೌಡಿ ಶೀಟರ್‌ಗೆ ತರಾಟೆಗೆ ತೆಗೆದುಕೊಂಡ ಕಮಿಷನರ್,
“ದೇವರ ಭಂಡಾರ ಹಚ್ಚ್ತೀಯಾ... ನಿನಗೆ ಪಾಪ ಪ್ರಜ್ಞೆ ಆಗಲ್ವಾ?” ಎಂದು ಪ್ರಶ್ನಿಸಿ, ಧಾರ್ಮಿಕ ನಂಬಿಕೆ ತೋರಿಸುವುದರ ಜೊತೆಗೆ ಜೀವನದಲ್ಲೂ ಸರಿ ದಾರಿಯಲ್ಲಿ ನಡೆಯಬೇಕು ಎಂದು ಬುದ್ಧಿವಾದ ಹೇಳಿದರು.

ಅಪರಾಧ ಚಟುವಟಿಕೆ ಮುಂದುವರೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಮಾಜದಲ್ಲಿ ಭಯ ಸೃಷ್ಟಿಸುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದ್ದಾರೆ ಎಂದು ಎಚ್ಚರಿಸಿದರು.

ರೌಡಿ ಶೀಟರ್‌ಗಳು ಹಳೆಯ ಜೀವನ ಬಿಟ್ಟು ಕುಟುಂಬ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಲಹೆ ನೀಡಿದರು.

ವರದಿ: ನ್ಯೂ ವಿಜಯ ನ್ಯೂಸ್

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...