⚡ಟ್ರೆಂಡಿಂಗ್

ಆರ್‌ಸಿಬಿ ಅಭಿಮಾನಿಗಳ ಅರೆಬೆತ್ತಲೆ ಹುಚ್ಚಾಟಕ್ಕೆ ಜಾಲತಾಣಗಳಲ್ಲಿ ಆಕ್ರೋಶ!ಕುಣಿತಕ್ಕೆ ಸಾರ್ವಜನಿಕರಿಂದ ಖಂಡನೆ

: ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕೆಲವು ಅಭಿಮಾನಿಗಳು ಮಿತಿ ಮೀರಿದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಕುಣಿದು ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕ್ರೀಡೆಯ ಮೇಲಿನ ಪ್ರೀತಿ ಮತ್ತು ಅಭಿಮಾನ ಸ್ವಾಗತಾರ್ಹ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಹಾಗೂ ಸಂಸ್ಕೃತಿ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು ಉತ್ಸಾಹ ತೋರಿದರೂ, ಕೆಲವರ ಅತಿರೇಕದ ವರ್ತನೆ ಇಡೀ ಅಭಿಮಾನಿ ಬಳಗಕ್ಕೆ ಕೆಟ್ಟ ಹೆಸರು ತರುತ್ತದೆ ಎಂಬ ಟೀಕೆಗಳು ಕೇಳಿಬಂದಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ತಪ್ಪಿಸಬೇಕು ಹಾಗೂ ಸಂಭ್ರಮಾಚರಣೆಗಳು ಶಾಂತಿಯುತ ಮತ್ತು ಗೌರವಯುತವಾಗಿರಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ನ್ಯೂ ವಿಜಯ ನ್ಯೂಸ್

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...