⚡ಟ್ರೆಂಡಿಂಗ್

ಧಾರವಾಡ ಜಿಲ್ಲಾ ಪೊಲೀಸರಿಂದ 49.950 ಕೆ.ಜಿ ಗಾಂಜಾ ನಾಶ


ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಧಾರವಾಡ ಪೊಲೀಸರ ಮಹತ್ವದ ಹೆಜ್ಜೆ

ಧಾರವಾಡ, ಜೂನ್ 25: ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಲಾಗಿದ್ದ 49 ಕೆ.ಜಿ 950 ಗ್ರಾಂ ಗಾಂಜಾವನ್ನು ನಿಯಮಾನುಸಾರ ನಾಶಪಡಿಸಿದರು.

ಬೆಂಗಳೂರು ಪ್ರಧಾನ ಕಚೇರಿಯ ನಿರ್ದೇಶನದಂತೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ರಚಿಸಲಾದ “ಡ್ರಗ್ ಡಿಸ್ಪೋಸಲ್ ಸಮಿತಿ” ಜೂನ್ 17ರಂದು ಸಭೆ ನಡೆಸಿ ಮಾದಕ ವಸ್ತುಗಳ ವಿಲೇವಾರಿ ಕುರಿತು ತೀರ್ಮಾನ ಕೈಗೊಂಡಿತ್ತು.

ಅದರಂತೆ 2025 ಮತ್ತು 2026ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ 3 ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಗಾಂಜಾವನ್ನು (ಮಾದರಿಗಾಗಿ ಕಾಯ್ದಿರಿಸಿದ ಪ್ರಮಾಣ ಹೊರತುಪಡಿಸಿ) ಜೂನ್ 25ರಂದು ವಿಲೇವಾರಿ ಮಾಡಲಾಯಿತು.

ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕಿ ಗುಂಜನ್ ಆರ್ಯ, ಧಾರವಾಡ ಗ್ರಾಮೀಣ ಉಪವಿಭಾಗದ ಡಿ.ಎಸ್.ಪಿ ವಿನೋದ ಮುಕ್ತೇದಾರ, ನವಲಗುಂದ ವೃತ್ತದ ಸಿ.ಪಿ.ಐ ರವಿ ಕಪ್ಪತ್ತನವರ ಸೇರಿದಂತೆ ಡ್ರಗ್ ಡಿಸ್ಪೋಸಲ್ ಸಮಿತಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು.

ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ M/s Rio Green India Ltd (CBMWTF) ಘಟಕದಲ್ಲಿ ಜಪ್ತಿಯಾದ ಗಾಂಜಾವನ್ನು ಸುಟ್ಟು ಸಂಪೂರ್ಣವಾಗಿ ನಾಶಪಡಿಸಲಾಯಿತು.

ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದ್ದು, ಯುವಜನತೆ ಮಾದಕ ವ್ಯಸನದಿಂದ ದೂರವಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...