ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಅವಳಿನಗರ, ನವನಗರ ಸೇರಿದಂತೆ 40ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಮೇ 26, 27ರಂದು ದೀರ್ಘ ವಿದ್ಯುತ್ ವ್ಯತ್ಯಯ, HESCOM ಮುಂಚಿತ ಸಿದ್ಧತೆಗಾಗಿ ಮನವಿ
ಧಾರವಾಡ: ಅವಳಿನಗರದ ಜನರೇ ಇಂದೇ ಎಚ್ಚೆತ್ತುಕೊಳ್ಳಿ! ಮೊಬೈಲ್, ಇನ್ವರ್ಟರ್ ಹಾಗೂ ಪವರ್ ಬ್ಯಾಂಕ್‌ಗಳನ್ನು ಈಗಲೇ ಫುಲ್ ಚಾರ್ಜ್ ಮಾಡಿ (Charging) ಇಟ್ಟುಕೊಳ್ಳಿ. ಯಾಕಂದ್ರೆ ಹುಬ್ಬಳ್ಳಿ ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆಯ ವಿವಿಧೆಡೆ ಬರೋಬ್ಬರಿ ಎರಡು ದಿನಗಳ ಕಾಲ ಭಾರಿ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ!
40ಕ್ಕೂ ಹೆಚ್ಚು ಬಡಾವಣೆಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಇರೋಲ್ಲ
ಹೌದು, ಹೆಸ್ಕಾಂ (HESCOM) ಅಧಿಕೃತ ಪ್ರಕಟಣೆಯ ಪ್ರಕಾರ, 110 ಕೆ.ವಿ. ವಿದ್ಯುತ್ ಉಪಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಮೇ 26 ಮತ್ತು ಮೇ 27 ರಂದು ಒಟ್ಟು 40ಕ್ಕೂ ಹೆಚ್ಚು ಪ್ರಮುಖ ವಸತಿ ಬಡಾವಣೆಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ಬಂದ್ ಆಗಲಿದೆ.

Post a Comment