⚡ಟ್ರೆಂಡಿಂಗ್

ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಹುಬ್ಬಳ್ಳಿ: ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕನ್ನಡ ಹೋರಾಟಗಾರರ ಸಮಿತಿಯ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ವಿನೂತನ ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬಾಯಿಗೆ ಕಪ್ಪು ಬಟ್ಟೆಗಳನ್ನು ಕಟ್ಟಿಕೊಂಡು, ವಿವಿಧ ಬೇಡಿಕೆಗಳಿರುವ ಭಿತ್ತಿಪತ್ರಗಳು ಹಾಗೂ ಪ್ರತಿಕಾತ್ಮಕವಾಗಿ ಎಮ್ಮೆಗಳನ್ನು ಹಿಡಿದು ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತದಾರರು ಪಾಲಿಕೆ ಸದಸ್ಯರನ್ನು ಆಯ್ಕೆ ಮಾಡಿದ್ದರೂ, ಇಂದು ಅದೇ ಜನರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮೇಯರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಲಾಯಿತು. ನಗರದಲ್ಲಿ ಅಗತ್ಯವಿರುವ ಕಡೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಯಾವಾಗ? ಸಾಂಸ್ಕೃತಿಕ ಭವನಗಳು ಹಾಗೂ ರಂಗಮಂದಿರಗಳ ನವೀಕರಣ ಯಾವಾಗ? ಸರ್ ಸಿದ್ದಪ್ಪ ಕಂಬಳಿ ಅವರ ಪ್ರತಿಮೆಯ ಸ್ಥಳಾಂತರ ಮತ್ತು ಇತರ ಮಹನೀಯರ ಪ್ರತಿಷ್ಠಾಪನೆ ಯಾವಾಗ? ಹುಬ್ಬಳ್ಳಿ ಮಹಾನಗರದ ಪ್ರಯಾಣಿಕರಿಗೆ ಸುಸಜ್ಜಿತ ಬಸ್ ನಿಲ್ದಾಣ ಎಲ್ಲಿದೆ? ನಗರದಲ್ಲಿನ ಪ್ಲೈಓವರ್ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ? ಪಾಲಿಕೆಯ ಮುಖ್ಯ ಕಚೇರಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಯಾವಾಗ ಕಲ್ಪಿಸಲಾಗುವುದು? ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವು ಕಾರ್ಯ ಯಾವಾಗ ನಡೆಯಲಿದೆ? ಉದ್ಯಾನವನಗಳ ಸೌಂದರ್ಯೀಕರಣ ಹಾಗೂ ಹಸಿರು ಹುಬ್ಬಳ್ಳಿ ನಿರ್ಮಾಣಕ್ಕೆ ಕ್ರಮ ಯಾವಾಗ ಕೈಗೊಳ್ಳಲಾಗುವುದು? ರಸ್ತೆಗಳಲ್ಲಿ ಕಂಡುಬರುವ ಗುಂಡಿಗಳ ಸಮಸ್ಯೆಯಿಂದ ಮುಕ್ತ ವಾರ್ಡ್‌ಗಳನ್ನು ಯಾವಾಗ ಕಾಣಬಹುದು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ವಿರೇಶ ಜಿಗಳೂರ, ಈರಪ್ಪ ಎಮ್ಮಿ, ರಮೇಶ್ ಹಳ್ಳಿಕೇರಿ, ಮೌನೇಶ ಅಂಬಿಗೇರ, ಖಾಜಾಸಾಬ ಅಸ್ಲಾಂ, ಪ್ರಕಾಶ ನಾಯ್ಕ, ಸಂಜೀವ ದುಮಕನಾಳ, ಶೇಖರಯ್ಯ ಮಠಪತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಪಾಲಿಕೆ ಆಡಳಿತವನ್ನು ಒತ್ತಾಯಿಸಿದರು.

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...