⚡ಟ್ರೆಂಡಿಂಗ್

🔴 ನ್ಯೂ ವಿಜಯ ನ್ಯೂಸ್ | ಹುಬ್ಬಳ್ಳಿ ಬ್ರೇಕಿಂಗ್ಹುಬ್ಬಳ್ಳಿ-ಧಾರವಾಡ ಜನತೆಗೆ ಮತ್ತೊಂದು ಟ್ಯಾಕ್ಸ್ ಶಾಕ್..!ವಸತಿ–ವಾಣಿಜ್ಯ ಕಟ್ಟಡಗಳ ಅಭಿವೃದ್ಧಿ ಶುಲ್ಕ ಹೆಚ್ಚಳಕ್ಕೆ ಪಾಲಿಕೆ ಸಿದ್ಧತೆ


ಹುಬ್ಬಳ್ಳಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ತೆರಿಗೆ ಭಾರದಿಂದ ಕಂಗೆಟ್ಟಿರುವ ಅವಳಿ ನಗರದ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಬೀಳುವ ಸಾಧ್ಯತೆ ಎದುರಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಪರವಾನಗಿ ಪಡೆಯುವ ವೇಳೆ ಪಾವತಿಸಬೇಕಾದ ಅಭಿವೃದ್ಧಿ ಶುಲ್ಕವನ್ನು ಹೆಚ್ಚಿಸಲು ಪಾಲಿಕೆ ಮುಂದಾಗಿದೆ.

➡️ ವಸತಿ ಕಟ್ಟಡಗಳ ಅಭಿವೃದ್ಧಿ ಶುಲ್ಕ ಶೇ.10ರಷ್ಟು ಹೆಚ್ಚಳ ಪ್ರಸ್ತಾವನೆ
➡️ ವಾಣಿಜ್ಯ ಕಟ್ಟಡಗಳ ಶುಲ್ಕದಲ್ಲೂ ಭಾರಿ ಏರಿಕೆ ಸಾಧ್ಯತೆ

ಪ್ರಸ್ತಾವನೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತರೆ —

🏠 ವಸತಿ ಕಟ್ಟಡ ಶುಲ್ಕ:
ಚ.ಮೀ.ಗೆ ₹3,111 ರಿಂದ ₹3,423ಕ್ಕೆ ಏರಿಕೆ

🏢 ವಾಣಿಜ್ಯ ಕಟ್ಟಡ ಶುಲ್ಕ:
ಚ.ಮೀ.ಗೆ ₹3,702 ರಿಂದ ₹4,443ಕ್ಕೆ ಏರಿಕೆ

ವಸತಿ ಅಭಿವೃದ್ಧಿ ಶುಲ್ಕದಲ್ಲಿ ಖಡಿ ರಸ್ತೆ, ಡಾಂಬರ್ ರಸ್ತೆ, ಚರಂಡಿ ವ್ಯವಸ್ಥೆ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಮೂಲಸೌಕರ್ಯ ಶುಲ್ಕಗಳು ಒಳಗೊಂಡಿವೆ.

ಈ ಹಿಂದೆ ಆಸ್ತಿ ತೆರಿಗೆ ಏರಿಕೆಯಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಅಭಿವೃದ್ಧಿ ಶುಲ್ಕ ಹೆಚ್ಚಳ ಪ್ರಸ್ತಾವನೆ ಚರ್ಚೆಗೆ ಕಾರಣವಾಗಿದೆ.

ಕಳೆದ ಬಾರಿ ಜನಪ್ರತಿನಿಧಿಗಳ ವಿರೋಧದಿಂದ ಶುಲ್ಕ ಏರಿಕೆಗೆ ತಡೆ ಬಿದ್ದಿತ್ತು. ಆದರೆ ಇದೀಗ ತೆರಿಗೆ ನಿರ್ಧರಣಾ ಮತ್ತು ಹಣಕಾಸು ಅಪೀಲುಗಳ ಸ್ಥಾಯಿ ಸಮಿತಿ ಠರಾವು ಅಂಗೀಕರಿಸಿ, ಸಾಮಾನ್ಯ ಸಭೆಯ ಮುಂದೆ ವಿಷಯ ಮಂಡಿಸಲು ಮುಂದಾಗಿದೆ.

ಪಾಲಿಕೆ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಅವಳಿ ನಗರದ ಮನೆ ಕಟ್ಟುವ ಕನಸು ಮತ್ತಷ್ಟು ದುಬಾರಿಯಾಗಲಿದೆ.

🎙️ ನ್ಯೂ ವಿಜಯ ನ್ಯೂಸ್
ಹುಬ್ಬಳ್ಳಿ-ಧಾರವಾಡ

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...