ಹುಬ್ಬಳ್ಳಿಯಲ್ಲಿ ಐಪಿಎಲ್ ಫೈನಲ್ ಪಂದ್ಯದ ಸಂಭ್ರಮ ಜೋರಾಗಿದ್ದು, ಆರ್‌ಸಿಬಿ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಹಳೆ ಹುಬ್ಬಳ್ಳಿಯ ಅಸರ್ ಹೊಂಡ ಪ್ರದೇಶದಲ್ಲಿ ಬೃಹತ್ ಗಾತ್ರದ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹಾಗೂ ಇತರ ಮುಖಂಡರು ಭಾಗವಹಿಸಿ ಪಂದ್ಯ ವೀಕ್ಷಿಸಿದರು. ದೊಡ್ಡ ಪರದೆಯ ಮೇಲೆ ಪಂದ್ಯವನ್ನು ವೀಕ್ಷಿಸಲು ನೂರಾರು ಕ್ರಿಕೆಟ್ ಅಭಿಮಾನಿಗಳು ಸೇರಿದ್ದು, ಉತ್ಸಾಹದಿಂದ ಪಂದ್ಯವನ್ನು ಆನಂದಿಸಿದರು.
ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿ, ಫೈನಲ್ ಪಂದ್ಯದಲ್ಲಿ ಜಯ ಸಾಧಿಸಲಿ ಎಂದು ಆಶಿಸಿದರು. ಪಂದ್ಯ ಸಾಗಿದಂತೆ ಅಭಿಮಾನಿಗಳ ಸಂಭ್ರಮ, ಘೋಷಣೆಗಳು ಹಾಗೂ ಚಪ್ಪಾಳೆಗಳೊಂದಿಗೆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ನ್ಯೂ ವಿಜಯ ನ್ಯೂಸ್ 🏏📺🔥
إرسال تعليق