⚡ಟ್ರೆಂಡಿಂಗ್

ಬರವಣಿಗೆಚಾಲುಕ್ಯ ನಗರಕ್ಕೆ ಬಸ್ ಸೌಲಭ್ಯ ಕಲ್ಪಿಸಿದ ಶ್ರೀ ದೀಪಕ ಚಿಂಚೋರೆ

ಚಾಲುಕ್ಯ ನಗರಕ್ಕೆ ಬಸ್ ಸೌಲಭ್ಯ ಕಲ್ಪಿಸಿದ ಶ್ರೀ ದೀಪಕ ಚಿಂಚೋರೆ

ಧಾರವಾಡದ ಕೆಲಗೇರಿ ಹಿಂಭಾಗದಲ್ಲಿರುವ ಚಾಲುಕ್ಯ ನಗರದ ನಿವಾಸಿಗಳು ಬಹಳ ದಿನಗಳಿಂದ ಬಸ್ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರು. ಆದರೆ, ಅಧಿಕಾರಿಗಳಿಂದ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸಮಸ್ಯೆಯನ್ನು ಜನನಾಯಕ ಶ್ರೀ ದೀಪಕ ಚಿಂಚೋರೆ ಅವರ ಗಮನಕ್ಕೆ ತಂದರು.

ನಿವಾಸಿಗಳ ಮನವಿಗೆ ತಕ್ಷಣ ಸ್ಪಂದಿಸಿದ ಶ್ರೀ ದೀಪಕ ಚಿಂಚೋರೆ ಅವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಚಾಲುಕ್ಯ ನಗರಕ್ಕೆ ಬಸ್ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾದರು.

ಇಂದು ಶ್ರೀ ದೀಪಕ ಚಿಂಚೋರೆ ಅವರು ನೂತನ ಬಸ್ ಸೇವೆಗೆ ಚಾಲನೆ ನೀಡಿ, ಸ್ವತಃ ಬಸ್‌ನಲ್ಲಿ ಚಾಲುಕ್ಯ ನಗರದವರೆಗೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಚಾಲುಕ್ಯ ನಗರದ ನಿವಾಸಿಗಳು ಸಂತಸ ವ್ಯಕ್ತಪಡಿಸಿ, ತಮ್ಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶ್ರೀ ದೀಪಕ ಚಿಂಚೋರೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಬಸ್ ವ್ಯವಸ್ಥೆ ಕಲ್ಪಿಸಿದಕ್ಕಾಗಿ ಸ್ಥಳೀಯರು ಶ್ರೀ ದೀಪಕ ಚಿಂಚೋರೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...