⚡ಟ್ರೆಂಡಿಂಗ್

ಕರ್ತವ್ಯ ಆ್ಯಪ್‌ಗೆ ಖಾಕಿ ಅಸಮಾಧಾನ..! ಹೊಸ ಹಾಜರಾತಿ ವ್ಯವಸ್ಥೆಗೆ ಪೊಲೀಸರ ವಿರೋಧ

 ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತಂದಿರುವ ಕರ್ತವ್ಯ ಆ್ಯಪ್ ಕುರಿತು ಸಿಬ್ಬಂದಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.


24x7 ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆ್ಯಪ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿರುವುದು ಹೆಚ್ಚುವರಿ ಒತ್ತಡ ತಂದಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.


“ನಿಗದಿತ ಸಮಯವಿಲ್ಲದೆ ಹಗಲು-ರಾತ್ರಿ ಕೆಲಸ ಮಾಡುತ್ತೇವೆ. ಆದರೆ ಕರ್ತವ್ಯದ ಸಂಪೂರ್ಣ ಸಮಯಕ್ಕೆ ಸರಿಯಾದ ಲೆಕ್ಕ ಸಿಗುತ್ತಿಲ್ಲ” ಎಂಬ ಅಸಮಾಧಾನವನ್ನು ಕೆಲ ಪೊಲೀಸ್ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.


ಹೊಸ ತಂತ್ರಜ್ಞಾನದಿಂದ ಪಾರದರ್ಶಕತೆ ತರಲು ಇಲಾಖೆ ಮುಂದಾಗಿದ್ದರೂ, ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಮಸ್ಯೆಗಳಿಗೂ ಪರಿಹಾರ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.
ವರದಿ: ನ್ಯೂ ವಿಜಯ ನ್ಯೂಸ್
ಸತ್ಯ....ನೇರ....ನಿರಂತರ

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...