⚡ಟ್ರೆಂಡಿಂಗ್

ಅಮ್ಮಿನಭಾವಿ ನೀರು ಸರಬರಾಜು ಘಟಕಕ್ಕೆ ರಾಜಶೇಖರ ಕಮತಿ ಭೇಟಿ – ಕಾಮಗಾರಿ ಪರಿಶೀಲನೆ


ಅಮ್ಮಿನಭಾವಿ.. ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುವ ಅಮ್ಮಿನಭಾವಿಯಲ್ಲಿರುವ ನೀರು ಸರಬರಾಜು ಘಟಕಕ್ಕೆ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಪಾಲಿಕೆ ಸದಸ್ಯರಾದ ಶ್ರೀ ರಾಜಶೇಖರ ಕಮತಿ ಅವರು ಭೇಟಿ ನೀಡಿ, ಘಟಕದಲ್ಲಿ ನಡೆಯುತ್ತಿರುವ ರಿಪೇರಿ ಕಾಮಗಾರಿಯನ್ನು ಪರಿಶೀಲಿಸಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಸರಬರಾಜು ಘಟಕದ ದುರಸ್ತಿ ಕಾಮಗಾರಿಯಲ್ಲಿ ವಿಳಂಬ ಉಂಟಾಗುತ್ತಿದ್ದು, ಮುಂದಿನ 2 ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಅಲ್ಲದೆ, ಮಳೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಕುಡಿಯುವ ನೀರನ್ನು ಕಡ್ಡಾಯವಾಗಿ ಕುದಿಸಿ ಬಳಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡಿದರು.

– ನ್ಯೂ ವಿಜಯ ನ್ಯೂಸ್

Post a Comment

Previous Post Next Post
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...