ಧಾರವಾಡ, ಜೂನ್ 9:
ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಜಾರಿಗೊಂಡಿರುವ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (PM SVANidhi) ಯೋಜನೆ ಅಡಿಯಲ್ಲಿ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಸ್ವ-ನಿಧಿ ಮಹೋತ್ಸವ, ನಗರ ಮಟ್ಟದಲ್ಲಿ ಲೋಕ ಕಲ್ಯಾಣ ಮೇಳ ಹಾಗೂ ಜನಗಣತಿ ಪಟ್ಟಣಗಳಲ್ಲಿ ಸ್ವ-ನಿಧಿ ಮೇಳಗಳನ್ನು ಜೂನ್ 1 ರಿಂದ ಜೂನ್ 30, 2026 ರವರೆಗೆ ಹಮ್ಮಿಕೊಳ್ಳಲಾಗಿದೆ.
2020ರಲ್ಲಿ ಆರಂಭಗೊಂಡ ಈ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಸಹಕಾರಿಯಾಗಿದ್ದು, ಯೋಜನೆ ಮಾರ್ಚ್ 2030ರವರೆಗೆ ಜಾರಿಯಲ್ಲಿರಲಿದೆ.
ಗುರುತಿನ ಚೀಟಿಗಾಗಿ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ ಪ್ರತಿ (ಕುಟುಂಬದ ಸದಸ್ಯರ ಸಹಿಯೊಂದಿಗೆ)
- ಮತದಾರರ ಗುರುತಿನ ಚೀಟಿ ಪ್ರತಿ
- ಪಡಿತರ ಚೀಟಿ ಪ್ರತಿ
- ಪಾಸ್‌ಪೋರ್ಟ್ ಗಾತ್ರದ 3 ಫೋಟೋ
- ಕುಟುಂಬ ಸದಸ್ಯರೊಂದಿಗೆ 2 ಗುಂಪು ಫೋಟೋ
- ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿ
- ವ್ಯಾಪಾರ ಮಾಡುವ ಸ್ಥಳದ 2 ಛಾಯಾಚಿತ್ರಗಳು
ಬೀದಿ ಬದಿ ವ್ಯಾಪಾರಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವಿವಿಧ ಯೋಜನೆಗಳಡಿ ವಿಮಾ ಸೌಲಭ್ಯ ಸೇರಿದಂತೆ ಇತರೆ ಪ್ರಯೋಜನಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡೇ-ನಲ್ಮ್ ಕಚೇರಿ, ಸಮುದಾಯ ಸಂಘಟನಾಧಿಕಾರಿಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಅಣ್ಣಿಗೇರಿ, ನವಲಗುಂದ, ಅಳ್ನಾವರ, ಕಲಘಟಗಿ, ಕುಂದಗೋಳ ಸ್ಥಳೀಯ ಸಂಸ್ಥೆಗಳ ಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment